Index   ವಚನ - 19    Search  
 
ಅಯ್ಯ! ಅಂಗಾಚಾರವುಳ್ಳ ಶಕ್ತಿ-ಭಕ್ತ-ಜಂಗಮದ ಗೃಹದಲ್ಲಿ ಲಿಂಗಾಚಾರವುಳ್ಳ ಶಿವಭಕ್ತಿ-ಶಿವಭಕ್ತ-ಶಿವಜಂಗಮವು ಜಿಹ್ವಾಲಂಪಟಕಿಚ್ಛೈಸಿ ಅವರ ಗೃಹದಲ್ಲಿ ಲಿಂಗಾರ್ಚನೆ-ಲಿಂಗಾರ್ಪಣವ ಮಾಡಲಾಗದು. ಇದ ಮೀರಿ ಅಂಗಭೋಗಿಗಳ ಸಮಪಾಕ, ಸಮಭಾಜನ, ಸಮಪಂಕ್ತಿ, ಶಿವಮಂತ್ರ, ಶಿವಪ್ರಸಾದ, ಶಿವಾನುಭಾವಗೋಷ್ಠಿಯ ಮಾಡಿದಡೆ ಬಸವ ಮೊದಲಾದ ಸಮಸ್ತಗಣಸಾಕ್ಷಿಯಾಗಿ ಶಿವಲೋಕ, ಶಾಂಭವಲೋಕ, ರುದ್ರಲೋಕ, ದೇವಲೋಕ, ಮರ್ತ್ಯಲೋಕ ಮೊದಲಾದ ಸಮಸ್ತಲೋಕಪಾವನಾರ್ಥ ಮಹಾಗಣಂಗಳ ಸಮಯಾಚಾರಕ್ಕೆ ಹೊರಗೆಂದಾತನಂಬಿಗರ ಚೌಡಯ್ಯನು.