ಅಯ್ಯಾ, ನಾವು ಪರಮವಿರಕ್ತರು,ಪಟ್ಟದ ಅಯ್ಯನವರು,
ಚರಮೂರ್ತಿಗಳು, ಪರದೇಶಿಗಳು ಎಂದು
ಶಂಖ ಗಿಳಿಲು ದಂಡಾಗ್ರ ಎಂಬ ಬಿರುದು ಪಿಡಿದು,
ಕಾವಿ ಕಾಷಾಯಾಂಬರವ ಹೊತ್ತು,
ಸರ್ವಕಾರ್ಯದಲ್ಲಿ ಶ್ರೇಷ್ಠರೆಂದು ಗರ್ವದಲ್ಲಿ ಕೊಬ್ಬಿ,
ಕಾಮನಾಟದಲ್ಲಿ ಕಲಕಿ, ಮನಸ್ಸಿನಲ್ಲಿ ದುರ್ಗುಣವನ್ನಿಟ್ಟುಕೊಂಡು
ಮಾತಿನಲ್ಲಿ ನೀತಿಯ ಸೇರಿಸುತ್ತ ಕಪಟದಲ್ಲಿ ಚರಿಸುವಂತಹ
ತೊನ್ನ ಹೊಲೆಮಾದಿಗರ ಸಂಗಮಾಡಲಾಗದು,
ಅವರ ಪ್ರಸಂಗವ ಕೇಳಲಾಗದು.ಅದೇನು ಕಾರಣವೆಂದಡೆ:
ಗುರುಲಿಂಗಜಂಗಮವಾದ ಬಳಿಕ
ಅಷ್ಟಾವರಣದಲ್ಲಿ ನಿಷ್ಠಾಪರವಾಗಿರಬೇಕು.
ಪರಧನ ಪರಸತಿಯರ ಹಿಡಿಯೆನೆಂಬ ನೇಮದಲ್ಲಿ ಬಲ್ಲಿದರಾಗಿರಬೇಕು.
ಶಿವಭಕ್ತರಾದವರ ಭವವ ಗೆಲಿಸಿ ಮೋಕ್ಷವ ಹೊಂದಿಸಬೇಕು.
ಶಿವಲಾಂಛನವ ಹೊತ್ತ ಬಳಿಕ ಶಿವನಂತಿರಬೇಕು.
ಬರಿದೆ, ನಾನು ಮಾಹೇಶ್ವರನೆಂದು, ನಾನು ಶಿವಭಕ್ತನೆಂದು
ತನ್ನ ಹೃನ್ಮಂದಿರದಲ್ಲಿ ನೆಲಸಿದ ಚಿನ್ಮಯಜಂಗಮಲಿಂಗಕ್ಕೆ
ತನು-ಮನ-ಧನವೆಂಬ ತ್ರಿವಿಧಪದಾರ್ಥವನರ್ಪಿಸಿ,
ತ್ರಿವಿಧಪ್ರಸಾದವ ಗರ್ಭೀಕರಿಸಿಕೊಂಡು, ಪ್ರಸನ್ನಪ್ರಸಾದವ ಸ್ವೀಕರಿಸಿ
ಪರತತ್ವಪ್ರಸಾದದಲ್ಲಿ ತಾನು ತಾನಾಗಲರಿಯದೆ
ಉಚ್ಚಂಗಿದುರ್ಗಿಗೆ ಬಿಟ್ಟ ಪೋತರಾಜನಂತೆ
ಮೂರು ಮೂರು ಜಡೆಗಳ ಬಿಟ್ಟು,
ಆಡಿನೊಳಗಿರುವ ಹಿರಿಯ ಹೋತಿನಂತೆ
ಮೊಳ ಮೊಳ ಗಡ್ಡವ ಬಿಟ್ಟು,
[ಡಂ]ಬ ಜಾತಿಗಾರನಂತೆ ವೇಷವ ತೊಟ್ಟು,
ಮೀಸೆಯ ಬೋಳಿಸಿಕೊಂಡು, ಕೈಪವ ಧರಿಸಿ,
ಸಂಸ್ಕೃತ ಗೀರ್ವಾಣಭಾಷೆಯ ಕಲಿತು,
ಕಾಕ ಕುಟಿಲ ಕುಹಕದ ಗಾಳಿಪೂಜೆಯಿಂದ ಬಂದ
ಸುಡಗಾಡು ಸಿದ್ಧಯ್ಯಗಳಂತೆ,
ಗಿಡಮೂಲಿಕೆಗಳು ತಂತ್ರ ಮಂತ್ರ ಯಂತ್ರದ
ಭಾಷೆಗಳ ಕಲಿತುಕೊಂಡು
ಪುರಜನರ ಮೆಚ್ಚಿಸಬೇಕೆಂದು
ಅಯ್ಯಾ, ನಾವು ಕೆರೆ ಭಾವಿಯನಗೆಸಬೇಕೆಂದು,
ಮಠ ಗುಡಿಯ ಕಟ್ಟಿಸಬೇಕೆಂದು,
ಮಾನ್ಯದಲಿ ಬಿಲ್ವಗಿಡಗಳ ಹಚ್ಚಬೇಕೆಂದು,
ಮದುವೆ ಅಯ್ಯಾಚಾರವ ಮಾಡಬೇಕೆಂದು,
ಅನ್ನಛತ್ರ ಅರವಟ್ಟಿಗೆಯ ಇಡಿಸಬೇಕೆಂದು,
ಪುರಾಣಗಳ ಹಚ್ಚಿಸಬೇಕೆಂದು,
ಇಂತಪ್ಪ ದುರಾಸೆಯ ಮುಂದುಗೊಂಡು
ನಾನಾ ದೇಶವ ತಿರುಗಿ,
ಅರಸರ ಮದದಂತೆ ಗರ್ವದಿಂದ ಹೆಚ್ಚಿ,
ಹೇಸಿ ಹೊಲೆ ಮಾದಿಗರ ಕಾಡಿ ಬೇಡಿ,
ಹುಸಿಯನೆ ಬೊಗಳಿ ಒಬ್ಬನ ಒಲವ ಮಾಡಿ[ಕೊಂ]ಡು,
ವ್ಯಾಪಾರ ಮರ್ಯಾದೆಯಲ್ಲಿ ಪೇಟೆಯಲ್ಲಿ ಕುಳಿತು
ಅನಂತ ಮಾತುಗಳನಾಡುತ್ತ,
ಸೆಟ್ಟಿ ಮುಂತಾದ ಅನಂತ ಕಳ್ಳ ಹಾದರಗಿತ್ತಿಯ
ಮಕ್ಕಳ ಮಾತಿನಿಂದೊಲಿಸಿ,
ಅವರು ಕೊಟ್ಟಡೆ ಹೊಗಳಿ, ಕೊಡದಿರ್ದಡೆ ಬೊಗಳಿ,
ಆ ಭ್ರಷ್ಟ ಹೊಲೆಮಾದಿಗರು ಕೊಟ್ಟ ದ್ರವ್ಯಗಳ
ತೆಗೆದುಕೊಂಡು ಬಂದು
ಕಡೆಗೆ ಚೋರರು ಒಯ್ದರೆಂದು ಮಠದೊಳಗೆ ಮಡಗಿಕೊಂಡು,
ಪರಸ್ತ್ರೀಯರ ಹಡಕಿ ಯೋನಿಯೊಳಗೆ ಇಂದ್ರಿಯ ಬಿಟ್ಟು,
ಕಾಮಕ್ರೋಧದಲ್ಲಿ ಮುಳುಗಿ ಮತಿಗೆಟ್ಟು,
ಶಿವಪಥಕ್ಕೆ ದೂರಾಗಿ, ದುರಾಚಾರವ ಆಚರಿಸಿ,
ನಡೆನುಡಿಗಳ ಹೊರತಾಗಿ, ವ್ಯರ್ಥ ಹೊತ್ತುಗಳೆದು,
ಸತ್ತುಹೋಗುವ ಜಡದೇಹಿ ಕಡುಪಾತಕ ಕತ್ತೆ ಹಡಿಕರಿಗೆ
ಪರಮ ನಿರಂಜನ ಜಂಗಮಲಿಂಗದೇವರೆಂದು ಕರೆತಂದು,
ಪಾದತೀರ್ಥ ಪ್ರಸಾದವ ತೆಗೆದುಕೊಂಬುವರಿಗೆ
ಇಪ್ಪತ್ತೊಂದು ಯುಗಪರಿಯಂತರ ನರಕಕೊಂಡದಲ್ಲಿಕ್ಕುವ.
ಇಂತಪ್ಪ ಜಂಗಮವನು ಪೂಜೆ ಮಾಡುವಂತಹ ಶಿವಭಕ್ತನ
ಉಭಯತರ ಮೂಗ ಸೀಳಿ ಮೆಣಸಿನ ಹಿಟ್ಟು ತುಪ್ಪವ ತುಂಬಿ,
ಪಡಿಹಾರಿ [ಉತ್ತಣ್ಣ]ಗಳೆಡದ ಪಾದುಕೆಯಿಂದ
ಪಡಪಡನೆ ಹೊಡಿ ಎಂದಾತ
ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
Art
Manuscript
Music
Courtesy:
Transliteration
Ayyā, nāvu paramaviraktaru,paṭṭada ayyanavaru,
caramūrtigaḷu, paradēśigaḷu endu
śaṅkha giḷilu daṇḍāgra emba birudu piḍidu,
kāvi kāṣāyāmbarava hottu,
sarvakāryadalli śrēṣṭharendu garvadalli kobbi,
kāmanāṭadalli kalaki, manas'sinalli durguṇavanniṭṭukoṇḍu
mātinalli nītiya sērisutta kapaṭadalli carisuvantahaTonna holemādigara saṅgamāḍalāgadu,
avara prasaṅgava kēḷalāgadu.Adēnu kāraṇavendaḍe:
Guruliṅgajaṅgamavāda baḷika
aṣṭāvaraṇadalli niṣṭhāparavāgirabēku.
Paradhana parasatiyara hiḍiyenemba nēmadalli ballidarāgirabēku.
Śivabhaktarādavara bhavava gelisi mōkṣava hondisabēku.
Śivalān̄chanava hotta baḷika śivanantirabēku.
Baride, nānu māhēśvaranendu, nānu śivabhaktanendu
tanna hr̥nmandiradalli nelasida cinmayajaṅgamaliṅgakke
tanu-mana-dhanavemba trividhapadārthavanarpisi,Trividhaprasādava garbhīkarisikoṇḍu, prasannaprasādava svīkarisi
paratatvaprasādadalli tānu tānāgalariyade
uccaṅgidurgige biṭṭa pōtarājanante
mūru mūru jaḍegaḷa biṭṭu,
āḍinoḷagiruva hiriya hōtinante
moḷa moḷa gaḍḍava biṭṭu,
[ḍaṁ]ba jātigāranante vēṣava toṭṭu,
mīseya bōḷisikoṇḍu, kaipava dharisi,
sanskr̥ta gīrvāṇabhāṣeya kalitu,Kāka kuṭila kuhakada gāḷipūjeyinda banda
suḍagāḍu sid'dhayyagaḷante,
giḍamūlikegaḷu tantra mantra yantrada
bhāṣegaḷa kalitukoṇḍu
purajanara meccisabēkendu
ayyā, nāvu kere bhāviyanagesabēkendu,
maṭha guḍiya kaṭṭisabēkendu,
mān'yadali bilvagiḍagaḷa haccabēkendu,
maduve ayyācārava māḍabēkendu,
annachatra aravaṭṭigeya iḍisabēkendu,
purāṇagaḷa haccisabēkendu,
intappa durāseya mundugoṇḍu
nānā dēśava tirugi,Arasara madadante garvadinda hecci,
hēsi hole mādigara kāḍi bēḍi,
husiyane bogaḷi obbana olava māḍi[koṁ]ḍu,
vyāpāra maryādeyalli pēṭeyalli kuḷitu
ananta mātugaḷanāḍutta,
seṭṭi muntāda ananta kaḷḷa hādaragittiya
makkaḷa mātinindolisi,
avaru koṭṭaḍe hogaḷi, koḍadirdaḍe bogaḷi,
ā bhraṣṭa holemādigaru koṭṭa dravyagaḷa
tegedukoṇḍu banduKaḍege cōraru oydarendu maṭhadoḷage maḍagikoṇḍu,
parastrīyara haḍaki yōniyoḷage indriya biṭṭu,
kāmakrōdhadalli muḷugi matigeṭṭu,
śivapathakke dūrāgi, durācārava ācarisi,
naḍenuḍigaḷa horatāgi, vyartha hottugaḷedu,
sattuhōguva jaḍadēhi kaḍupātaka katte haḍikarige
parama niran̄jana jaṅgamaliṅgadēvarendu karetandu,
pādatīrtha prasādava tegedukombuvarigeIppattondu yugapariyantara narakakoṇḍadallikkuva.
Intappa jaṅgamavanu pūje māḍuvantaha śivabhaktana
ubhayatara mūga sīḷi meṇasina hiṭṭu tuppava tumbi,
paḍ'̔ihāri [uttaṇṇa]gaḷeḍada pādukeyinda
paḍapaḍane hoḍi endāta
nam'ma ambigara cauḍayya nijaśaraṇanu.