Index   ವಚನ - 31    Search  
 
ಅರುಹಿಯರ ದೈವ ಅಗಲ [ತೈಲವಿ]ಲ್ಲಾ ಎಂದಡೆ ಹೊಲೆಯರ ಬೊ[ಮ್ಮು]ಗ ತೋಯೆ ತುಪ್ಪವ ಬೇಡುವಂತೆ ಬ್ರಹ್ಮವಿಷ್ಣುಗಳೆಂಬರಿನ್ನು ಕಾಣರು, ವೇದಂಗಳು ನಾಚದೆ ನುಡಿವ ಪರಿಯ ನೋಡಾ! ಗಂಗೆವಾಳುಕಸಮರುದ್ರರು ಲಿಂಗವ ಕಂಡರೈಸೆ, ಸ್ವಯಂಭುವ ಕಾಣರೆಂದನಂಬಿಗರ ಚೌಡಯ್ಯ.