Index   ವಚನ - 36    Search  
 
ಅಳುಪೆಂಬ ನಾಯ ಕಳವಳದರ್ಥವ ಇದ ಬಿಡೈ, ನಿನಗೆ ಸಂಗಡವಲ್ಲ. ಬಂದ ಹೊಲೆಯನ, ನಿಂದ ಹಾರುವನ ಇವರಿಬ್ಬರ ಕೂಡಿಕೊಂಡು ನಿನಗೆ ದೇಹಾರವಾಗದಣ್ಣಾ. ಇವರ ಹಿಂಗಿಸಿ ನಿಜವರಿದು, ನಿಂದಲ್ಲಿ ನೆನದಡೆ ಅಂದಿಂಗಲ್ಲದೆ ಶಿವನಿರನೆಂದಾತನಂಬಿಗರ ಚೌಡಯ್ಯ.