Index   ವಚನ - 38    Search  
 
ಆದಿ ಅನಾದಿಯಿಂದತ್ತಣಶರಣನ ಷಡಾಧಾರಚಕ್ರದೊಳಗೆ ಷಡುಲಿಂಗವು, ಷಡುಮಂತ್ರವು,ಷಡುಭಕ್ತರು, ಷಡುಶಕ್ತಿಗಳು ಇದ್ದುವಯ್ಯ. ಆ ಶರಣನ ಜ್ಞಾನಕ್ರೀ ಅರವತ್ತುನಾಲ್ಕು ಭೇದವಾಯಿತ್ತಯ್ಯ, ಒಬ್ಬ ಶರಣನು ಅನಂತ ಶರಣರಾದುದ ಕಂಡೆನೆಂದಾತ ನಮ್ಮ ಅಂಬಿಗರ ಚೌಡಯ್ಯ.