Index   ವಚನ - 41    Search  
 
ಆಯತಲಿಂಗದಲ್ಲಿ ಅನುಭಾವ ಸಾಹಿತ್ಯವಾಗದು. ಸ್ವಾಯತಲಿಂಗದಲ್ಲಿ ನಿರ್ಗಮನ ಸಾಹಿತ್ಯವಾಗದು. ಇದೆಂತಯ್ಯಾ ಆಯತವು? ಇದೆಂತಯ್ಯ ಸ್ವಾಯತವು? ಆಯತ ಸ್ವಾಯತವೆಂಬ ಉಭಯ ಕುಳಸ್ಥಳವರಿಯದಿದ್ದಡೆ ಅನಾಯತವಾಗಿ ಹೋರಿತ್ತೆಂದಂಬಿಗರ ಚೌಡಯ್ಯ.