Index   ವಚನ - 52    Search  
 
ಈಶಲಾಂಛನವ ತೊಟ್ಟು ಮನ್ಮಥವೇಷಲಾಂಛನವ ತೊಡಲೇತಕ್ಕೆ? ಇದು ನಿಮ್ಮ ನುಡಿ ನಡೆಗೆ ನಾಚಿಕೆಯಲ್ಲವೆ? ಅಂದಳ ಛತ್ರ, ಆಭರಣ, ಕರಿತುರಗಂಗಳ ಗೊಂದಣವೇತಕ್ಕೆ? ಅದು ಘನಲಿಂಗದ ಮೆಚ್ಚಲ್ಲ, ಎಂದನಂಬಿಗರ ಚೌಡಯ್ಯ