Index   ವಚನ - 63    Search  
 
ಎಲ್ಲಾ ದೇವರಿಗೆ ಮಸ್ತಕದ ಪೂಜೆ, ನಮ್ಮ ಗುರುಲಿಂಗಜಂಗಮದೇವರಿಗೆ ಪಾದಾಂಗುಷ್ಟದ ಪೂಜೆಯೆಂಬುದು ಸಕಲ ವೇದಶಾಸ್ತ್ರಪುರಾಣಾಗಮಂಗಳು, ಶ್ರುತಿಸ್ಮೃತಿಗಳು ಸಾರುತ್ತಿರಲು, ಅದನರಿತು ಓದುತ್ತ ಓದುತ್ತ ಹಾಡುತ್ತ ಹಾಡುತ್ತ ಅದಕ್ಕೆ ಅಪಖ್ಯಾತಿಯ ತರುವವನೆಂತು ಜಂಗಮವೊ? ಅವನೆಂತು ಭಕ್ತನೊ? ತಾನೊಡೆಯ[ನಂ]ತೆ, ತಾ ಭಕ್ತನಂತೆ, ತನ್ನೆಡೆಯ ಗುಡಿಯ ಲಿಂಗದ ಮುಂದಿಟ್ಟು ತನ್ನಿಷ್ಟಲಿಂಗಕ್ಕೆ ಕೊಟ್ಟು ಕೊಂಬ ತುಡುಗುಣಿ ನಾಯ ಮೂಳಹೊಲೆಯರ ಕಂಡಡೆ ನಡುವಿನ ಮೇಲೆ ಒದೆಯೆಂದಾತ ನಮ್ಮ ಅಂಬಿಗರ ಚೌಡಯ್ಯ.