Index   ವಚನ - 62    Search  
 
ಎಲ್ಲವ ಕಳಿದುಳಿದ ಹೂವ ತಂದು, ಗೆಲ್ಲ ಸೋಲಕ್ಕೊಳಗಾಗದ ನೀರ ತುಂಬಿ, ಕರಣಂಗಳೆಲ್ಲವು ಕಂಗಳ ತುಂಬಿ ನಿಂದು ನೋಡಿ, ಎಂದೂ ತನ್ನಂಗದಿಚ್ಛೆಯ ಮರೆದು, ಲಿಂಗವ ಪೂಜಿಸಬೇಕೆಂದನಂಬಿಗರ ಚೌಡಯ್ಯ.