Index   ವಚನ - 90    Search  
 
ಕಷ್ಟಜೀವನ ಮನುಜರಿರಾ, ನೀವು ಹುಟ್ಟಿದ ಮೊದಲು, ಎಷ್ಟು ಮಂದಿ ನಿಮ್ಮ ಕಣ್ಣ ಮುಂದೆ ನಷ್ಟವಾಗಿ ಹೋದುದ ಕಂಡು ಕಂಡೂ ಹೆಂಡಿರು ತನ್ನವರೆಂ[ಬಿರೆ]? ಮಿಂಡಿಯಾಗಿ ಹಲವರ ಬಯಸುವವಳ ಮಕ್ಕಳ ತನ್ನವರೆಂ[ಬಿರೆ]? ಕೂಡುವಾಗ ದುಃಖ, ಕೂಡಿದ ಒಡವೆಯ ಮಡಗುವಾಗ ದುಃಖ, ಮಡಗಿದ ಒಡವೆಯ ತೆಗೆವಾಗ ದುಃಖ, ಪ್ರಾಣವ ಬಿಡುವಾಗ ದುಃಖ, ಹೊಲೆ ಸಂಸಾರವ ನಚ್ಚಿ ಕಾಲನ ಬಲೆಗೆ ಈಡಾ[ಗ]ದಿರೊ, ಪತಿಭಕ್ತಿ, ಮುಕ್ತಿಯೆಂಬುದ ಗಳಿಸಿಕೊಳ್ಳಿರೊ, ಸಟೆಯಂ ಬಿಡಿ, ದಿಟವಂ ಹಿಡಿ, ಘಟವುಳ್ಳ ಕಾಲದಲ್ಲಿ ಶಿವಭಕ್ತಿಯ ನಟಿಸಿ ನಡೆ, ಎಂದಾತ ನಮ್ಮ ಅಂಬಿಗರ ಚೌಡಯ್ಯ.