Index   ವಚನ - 91    Search  
 
ಕಷ್ಟನ ಮನೆಯಲ್ಲಿ ಸೃಷ್ಟಿಗೀಶ್ವರನುಂಬಾಗ ಎತ್ತ ಹೋದವು ನಿಮ್ಮ ಶಾಸ್ತ್ರಂಗಳು? ಕೆತ್ತ ಮುಚ್ಚುಳು [ಜೇ]ಡಗಚ್ಚರಿದೆರೆವಾಗ ಇಕ್ಕಿದ ಜನಿವಾರ ಭಿನ್ನವಾದವು. ಮುಕ್ಕುಳಿಸಿದುದಕವ ತಂದೆರೆದಡೆ ಎತ್ತಲಿದ್ದವು ನಿಮ್ಮ ವೇದಂಗಳು? ನಿಮ್ಮ ವೇದದ ದುಃಖ ಬೇಡೆಂದಾತನಂಬಿಗರ ಚೌಡಯ್ಯ.