Index   ವಚನ - 93    Search  
 
ಕಳ್ಳ, ಹಾದರಿಗ, ಸೂಳೆಗಾರ, ತಳವಾರನಲ್ಲಿ ಮಿಥ್ಯವಿಲ್ಲದಿರಬೇಕು. ಸತ್ಯಸದಾಚಾರಿಗಳಲ್ಲಿ ಸದ್ಭಕ್ತ ಮಿಥ್ಯತಥ್ಯವಿಲ್ಲದಿರಬೇಕು. ಈ ಗುಣ ನಿತ್ಯನಿಜೈಕ್ಯನ ಯುಕ್ತಿಯೆಂದನಂಬಿಗರ ಚೌಡಯ್ಯ.