Index   ವಚನ - 97    Search  
 
ಕಾಯದಿಂದ ಕಂಡೆಹೆನೆಂದಡೆ ಬ್ರಹ್ಮನ ಹಂಗು, ಜೀವದಿಂದ ಕಂಡೆಹೆನೆಂದಡೆ ವಿಷ್ಣುವಿನ ಹಂಗು, ಅರಿವಿನಿಂದ ಕಂಡೆಹೆನೆಂದಡೆ ರುದ್ರನ ಹಂಗು, ಕಾಬ ಕಾಬಲ್ಲಿ ಕಂಡೆಹೆನೆಂದಡೆ ನಾಡೆಲ್ಲರ ಹಂಗು. ಇವನೆಲ್ಲವನಲ್ಲಾ ಎಂದು ನಿಲಿಕಿ ನೋಡಿ ಕಂಡ ಅಂಬಿಗರ ಚೌಡಯ್ಯ.