Index   ವಚನ - 98    Search  
 
ಕಾಲ ವೇಳೆಯನರಿತು ಕೂಗಿದ ಕೋಳಿಯ ಕಂಡು, ಊರೆಲ್ಲರು ಬೆಳಗಾಯಿತ್ತೆಂದು ಏಳುವರಿಂದ ಕಡೆಯೆ? ಹೇಳುವ ಕೇಳುವ ಮಾತ ಕೇಳಿ ಆರ ಮರೆದು ಮೂರನರಿದು ಈರೈದು ಕಂಡು ಬೇರೈದರಲ್ಲಿ ಗಾರಾಗದೆ, ಸಾರಿದೆ, ಕೆಡಬೇಡೆಂದನಂಬಿಗರ ಚೌಡಯ್ಯ.