Index   ವಚನ - 131    Search  
 
ಜಂಗಮವೆಂದಡೆ ನಡೆನುಡಿ ಸಿದ್ಧಿಯಾಗಿರಬೇಕು. ಮೂರು ಮಲಕ್ಕೆ ಸಿಕ್ಕದೆ, ಆರರಡಿಗೆ ಅ[ಡಿ]ಮೆಯಾಗದೆ, ಆ ಗುಣ ತೋರುವುದಕ್ಕೆ ಮೊದಲೆ ಮೀರಿ ಇರಬೇಕೆಂದನಂಬಿಗರ ಚೌಡಯ್ಯ.