Index   ವಚನ - 135    Search  
 
ಜೇಡಂಗೆ ಬೇಡಂಗೆ ಡೋಹಾರಂಗೆ ಹೊಲೆಯಂಗೆ ರೂಢಿಗೀಶ್ವರನೊಲಿದ ಪರಿಯ ನೋಡಾ ಅಯ್ಯಾ! ಲೋಕದ ಮನುಜರು ಮಾಡುವರು, ಸಮಯಂಗಳನು. ಮಾಡಲಿಕ್ಕೆಅವರು ಸ್ವತಂತ್ರರು. [ಅ]ವರು ಹೋದ ಠಾವಿನಲ್ಲಿ ಕಲ್ಲು ಮುಳ್ಳು ಮೂಡವು. ಅವರ ಕೂಡ ಕೂರದಾತನಂಬಿಗರ ಚೌಡಯ್ಯ.