Index   ವಚನ - 152    Search  
 
ದೃಷ್ಟವ ಕಂಡುದಕ್ಕೆ ಮತ್ತೆ ಮೂದಲೆ ಉಂಟೆ? ವ್ರತಗೆಟ್ಟವಂಗೆ ಆಚಾರಭ್ರಷ್ಟಂಗೆ ಪರಸತಿ ಪರಧನ ದುರ್ಭಿಕ್ಷಂಗೆ ಪರ ಅಪರವನರಿಯದ ಪಾತಕಂಗೆ ಅಘೋರ ನರಕಕ್ಕೆಡೆಯಿಲ್ಲ ಎಂದನಂಬಿಗರ ಚೌಡಯ್ಯ.