Index   ವಚನ - 151    Search  
 
ತೋಯವಿಲ್ಲದ ಕುಂಭ, ಜ್ಞಾನವಿಲ್ಲದ ಘಟ, ದೇವರಿಲ್ಲದ ಗುಡಿ ಇವು ಹಾಳು ದೇಗುಲ ಸಮವು. ಎಲೆ ಪರವಾದಿಗಳಿರಾ: ಗುರುವು ಎಂಬ ನಾಮವು ಪರಶಿವನು, ಪರಶಿವನೆ ಇಷ್ಟಲಿಂಗವು. ಆ ಇಷ್ಟಲಿಂಗದ ಪೂಜೆಯಲ್ಲಿ ಲೋಲುಪ್ತನಾಗಿರಬೇಕು, ಆ ಗುರುಮಂತ್ರದಲ್ಲಿ ಮಗ್ನನಾಗಿರಬೇಕು, ಚರಭಕ್ತಿಯಲ್ಲಿ ಯುಕ್ತನಾಗಿರಬೇಕು. ಈ ತ್ರಿವಿಧವ ಬಿಟ್ಟು, ಮಲತ್ರಯಕ್ಕೆ ಒಳಗಾಗಿ ಬಂಧನಕ್ಕೆ ಹೋಗುವರ ನೋಡಿಮನ ನಾಚಿತ್ತೆಂದ ನಮ್ಮ ಅಂಬಿಗರ ಚೌಡಯ್ಯನಿಜಶರಣನು.