ನೀರೊಳಗಿಕ್ಕಿದ ಕೋಲಿನಂತೆ,
ಭೇದವನೊಳಗೊಂಡ ವಾದ್ಯದಂತೆ,
ನಾದದಲ್ಲಿ ಸೋಂಕಿದ ಶೂನ್ಯದಂತೆ,
ಭೇದಾಭೇದಂಗಳಲ್ಲಿ ಅಭೇದ್ಯವ ಭೇದಿಸಬಲ್ಲಡೆ,
ನಾದ ಬಿಂದು ಕಳೆಗೆ ಅತೀತವೆಂದನಂಬಿಗರ ಚೌಡಯ್ಯ.
Art
Manuscript
Music
Courtesy:
Transliteration
Nīroḷagikkida kōlinante,
bhēdavanoḷagoṇḍa vādyadante,
nādadalli sōṅkida śūn'yadante,
bhēdābhēdaṅgaḷalli abhēdyava bhēdisaballaḍe,
nāda bindu kaḷege atītavendanambigara cauḍayya.