Index   ವಚನ - 170    Search  
 
ನೇಮಸ್ಥನೆಂಬವ ಕ್ರೂರಕರ್ಮಿ, ಶೀಲವಂತನೆಂಬವ ಸಂದೇಹಧಾರಿ. ಭಾಷೆವಂತನೆಂಬವ ಬ್ರಹ್ಮೇತಿಕಾರ. ಇವರು ಮೂವರು ಕುಳ್ಳಿರ್ದಲ್ಲಿ ಕುಳ್ಳಿರಲಾಗದು. ಇವರು ಹೋದ ಬಟ್ಟೆಯ ಹೊಗಲಾಗದು. ಇವರು ಮೂವರಿಗೂ ಗುರುವಿಲ್ಲ, ಲಿಂಗವಿಲ್ಲೆಂದಾತನಂಬಿಗರ ಚೌಡಯ್ಯ.