Index   ವಚನ - 197    Search  
 
ಬ್ರಹ್ಮ ಮೊದಲನರಿಯ, ವಿಷ್ಣು ತುದಿಯನರಿಯ, ಎಡೆಯಣ ಮಾನವರೆತ್ತ ಬಲ್ಲರೊ ಮೃಡನಂತುವ? ಇತ್ತಣ ಮನ[ದ]ವರಿತ್ತಿತ್ತ ಕೇಳಿ ಅತ್ತಣ ಸುದ್ದಿ ನಿಮಗೇತಕ್ಕೆ? ನಿಸ್ಸಂಗಿ ನಿರೂಪದ ಮಹಾತ್ಮರೆ ಬಲ್ಲರೆಂದನಂಬಿಗರ ಚೌಡಯ್ಯ.