Index   ವಚನ - 199    Search  
 
ಭಕ್ತ ನಂಬಿದರೆ ಕೊಪ್ಪದ ರಾಮಯ್ಯನಂತೆ ನಂಬಬೇಕಯ್ಯಾ, ಭಕ್ತ ನಂಬಿದರೆ ಕೆಂಭಾವಿ ಭೋಗಣ್ಣನಂತೆ ನಂಬಬೇಕಯ್ಯಾ, ಭಕ್ತ ನಂಬಿದರೆ ಚೇದಿರಾಜಯ್ಯನಂತೆ ನಂಬಬೇಕಯ್ಯಾ, ಭಕ್ತ ನಂಬಿದರೆ ಏಣಾದಿನಾಥನಂತೆ ನಂಬಬೇಕಯ್ಯಾ. ಇಂತಪ್ಪ ನಂಬಿಗೆಗೆ ತಾನು ಸರಿಯೆಂದು, ಬೀದಿಯ ಪೋರನಂತೆ ತನ್ನಯ ಮನದೊಳಗೊಂದು ಮಾತು, ಹೊರಗೊಂದು ಮಾತು, ತುದಿನಾಲಗೆಯಲ್ಲಿ ಭಕ್ತರ ನಂಬಿದೆನೆಂದು ಗಳಹುವ ಗೊಡ್ಡ ಹೊಲೆಯನ ಕಂಡೊಡೆ ಎದೆ ಎದೆಯನು ಒದ್ದೊದ್ದು ತುಳಿಯೆಂದಾತ ನಮ್ಮ ಅಂಬಿಗರ ಚೌಡಯ್ಯ.