Index   ವಚನ - 205    Search  
 
ಭೋಗಕ್ಕೆ ಸಾಧನದ್ರವ್ಯ ಬಂದರೆ ಬೇಗ ಬೇಗ ಸಂಭ್ರಮಿಸುವರು, ಬಾರದಿರ್ದರೆ ಕಂದುವರು ಕುಂದುವರು. ಈ [ಉ]ಭಯದ ಸಂದಿನಲ್ಲಿ ಸಿಕ್ಕಿ ದಂದುಗಕ್ಕೊಳಗಾಗಿ ಸಂದ[ಣಿ]ಗೊಂಬಾತಗೆಂದೆಂದಿಗೂ ಸಂಸಾರ ಬಿಡದು. ಬೆಂದೊಡಲಿಗೇಕೆ ಈಸು ಸಡಗರವೆಂದಾತ ನಮ್ಮಂಬಿಗರ ಚೌಡಯ್ಯ.