Index   ವಚನ - 207    Search  
 
ಮಡುವಿನಲ್ಲಿ ಮೊಗೆತಹೆನೆ? ಅಗ್ಗವಣಿ ಶುದ್ಧವಲ್ಲ. ಗಿಡುವಿನ ಪುಷ್ಪವ ತಹೆನೆ? ಹೂ ನಿರ್ಮಾಲ್ಯ. ಅಟ್ಟ ಡಿಗೆಯನಾದಡೆ ಮನ ಮುನ್ನವೆ ಉಂಡಿತ್ತು. ನುಡಿವ ಶಬ್ದ ಎಂಜಲಾಯಿತ್ತು. ಹಿಡಿಯೊಳಯಿಂಕೆ ಒಂದ ಕೊಂಡುಬಂದು ಲಿಂಗವೆಂದು ಸಂಕಲ್ಪವ ಮಾಡಿದಡೆ ಅದಕ್ಕೆ ಬೋನವ ಕೊಡಲೊಲ್ಲೆನೆಂದನಂಬಿಗರ ಚೌಡಯ್ಯ.