ಮಹಾಘನಲಿಂಗದ ನಿಜಘನವೆಂಬ ಚಿದ್ಘನಾತ್ಮಕ
ಶರಣನ ಲೀಲೆಯಿಂದ
ಮಹಾಜ್ಯೋತಿ ಹುಟ್ಟಿತ್ತು,
ಆ ಜ್ಯೋತಿಯ ಬೆಳಗಿನಲ್ಲಿ
ಅರಿವು ಮರವೆಂಬ ಭೂತಾತ್ಮ ಮಹಾತ್ಮಂಗಳು ಹುಟ್ಟಿದವು.
ಆತ್ಮಂಗಳಿಂದ ಜ್ಞಾನಾತ್ಮ, ಶುದ್ಧಾತ್ಮ, ನಿರ್ಮಲಾತ್ಮ,
ಪರಮಾತ್ಮ, ಅಂತರಾತ್ಮ, ಜೀವಾತ್ಮಂಗಳು ಹುಟ್ಟಿದವು.
ಆ ಜ್ಞಾನಾತ್ಮನಲ್ಲಿ ಮಹಾನುಭಾವಜ್ಞಾನಂಗಳು ಹುಟ್ಟಿ ತ್ರಿಯಕ್ಷರಾದವು.
ಆ ತ್ರಿಯಕ್ಷರಂಗಳಲ್ಲಿ ಓಂಕಾರ ಹುಟ್ಟಿತ್ತು.
ಆ ಓಂಕಾರದಲ್ಲಿ ಪಂಚಾಕ್ಷರಂಗಳು ಹುಟ್ಟಿದವು.
ಆ ಪಂಚಾಕ್ಷರಂಗಳಲ್ಲಿ ಐವತ್ತೆರಡು ಅಕ್ಷರಂಗಳು ಹುಟ್ಟಿದವು.
ಇಂತೀ ಅಕ್ಷರಂಗಳೆಲ್ಲವನು
ಷಡಾತ್ಮಕರ ಪ್ರಾಣವೆಂದಾತ
ನಮ್ಮ ಅಂಬಿಗರ ಚೌಡಯ್ಯ.
Art
Manuscript
Music
Courtesy:
Transliteration
Mahāghanaliṅgada nijaghanavemba cidghanātmaka
śaraṇana līleyinda
mahājyōti huṭṭittu,
ā jyōtiya beḷaginalli
arivu maravemba bhūtātma mahātmaṅgaḷu huṭṭidavu.
Ātmaṅgaḷinda jñānātma, śud'dhātma, nirmalātma,
paramātma, antarātma, jīvātmaṅgaḷu huṭṭidavu.
Ā jñānātmanalli mahānubhāvajñānaṅgaḷu huṭṭi triyakṣarādavu.
Ā triyakṣaraṅgaḷalli ōṅkāra huṭṭittu.
Ā ōṅkāradalli pan̄cākṣaraṅgaḷu huṭṭidavu.
Ā pan̄cākṣaraṅgaḷalli aivatteraḍu akṣaraṅgaḷu huṭṭidavu.
Intī akṣaraṅgaḷellavanu
ṣaḍātmakara prāṇavendāta
nam'ma ambigara cauḍayya.