Index   ವಚನ - 214    Search  
 
ಮಳಲ ಮರೆಯ ನೀರ ಒಲವರವಿಲ್ಲದೆ ತೋಡಿ, ಚಿಲುಮೆಯ ಶೀಲವಂತರೆಂದು ಹಲುಬುತ್ತಿರಲೇತಕ್ಕೆ? ಸಲೆ ವಸ್ತುವನರಿತು ತ್ರಿವಿಧದ ಹೊಲಬಿನಾಸೆಯ ಬಿಟ್ಟು ಸಲೆ ಗೆದ್ದಡೆ, ಬೇರೊಂದು ಹೊಲಬ ತೋರಿಹೆನೆಂದನಂಬಿಗರ ಚೌಡಯ್ಯ.