Index   ವಚನ - 227    Search  
 
ಲಿಂಗತನುವಿಂಗೆ ಶೃಂಗಾರವಪ್ಪ ತೆರನಾವುದೆಂದಡೆ: ಕಾಮ ಕ್ರೋಧ ಲೋಭ ಮೋಹಾದಿಗಳಲ್ಲಿ ತೆರಪುಗೊಡದಿಪ್ಪುದು. ಲಿಂಗವೆ ಅಂಗವಾಗಿ, ಧ್ಯಾನ ಧಾರಣ ನಿಜವಾಸ ನಿವಾಸವಾಗಿ, ನಿಶ್ಚಯ ನಿಜತತ್ವವಾಗಿ ನಿಂದುದೆ ಆಭರಣವೆಂದನಂಬಿಗರ ಚೌಡಯ್ಯ.