Index   ವಚನ - 230    Search  
 
ಲಿಂಗವನರಿದೆಹೆನೆಂದಡೆ ಗುರುವಿಗೆ ಹಂಗು, ಗುರುವನರಿದೆಹೆನೆಂದಡೆ ಲಿಂಗದ ಹಂಗು, ಉಭಯವ ಮೀರಿ ಕಂಡೆಹೆನೆಂದಡೆ ಬೇರೊಂದೊಡಲುಂಟು. ಒಡಲು ಒಡೆದಲ್ಲದೆ ಬೇರೊಂದೆಡೆಯಿಲ್ಲ ಎಂದನಂಬಿಗರ ಚೌಡಯ್ಯ.