Index   ವಚನ - 235    Search  
 
ವಸ್ತುವ ಕಾಬರೆಲ್ಲರು ಆತ್ಮ ಹಲವು ಬಗೆ ಎಂದಡೆ, ಹಲವಾದುದುಂಟೆ? ಒಂದು ಕುಂಭದ ನೀರು ಹಲವು ರಂಧ್ರಗಳಲ್ಲಿಳಿವುದು. ಅದು ಕುಂಭದ ಭೇದವೋ? ಜಲದ ಭೇದವೋ? ಈ ಉಭಯ ಭೇದವ ತಿಳಿದಲ್ಲಿ ಆತ್ಮನೊಂದೆಯೆಂದನಂಬಿಗರ ಚೌಡಯ್ಯ.