Index   ವಚನ - 236    Search  
 
ವಿಹಂಗಂಗೆ ಗುರಿಯಾಸೆಯೆಂದಡೆ ಸಂಚಾರವಿಲ್ಲದೆ ಚರಿಸಬಹುದೆ? ಅರಿವಿಂಗೆ ಕುರುಹಿನಾಸೆಯೆಂದಡೆ, ಆ ಅರಿವು ಕುರುಹಿನೊಳಗಾದ ಮತ್ತೆ, ಬೇರೊಂದು ಕುರುಹೆಂಬ ನಾಮವುಂಟೆ? ಚಿತ್ರದ ಬೊಂಬೆಗಳಿದ್ದ ಮನೆ ಕಿಚ್ಚೆದ್ದು ಬೇವಲ್ಲಿ ಬೊಂಬೆಯ ಹೊತ್ತಿದ ಕಿಚ್ಚು ಚಿತ್ರವಾಗಿ ಉರಿವುದೆ? ನಿಶ್ಚಯವನರಿದ ನಿಜಾತ್ಮನು ಮತ್ತೆ ಕತ್ತಲೆಯ ಹೊಗನೆಂದನಂಬಿಗರ ಚೌಡಯ್ಯ.