Index   ವಚನ - 269    Search  
 
ಹಿಡಿ ಪುಣ್ಯವ, ಬಿಡು ಪಾಪವ, ಸತ್ವ ರಜ ತಮ, ಒಡಲೈದು ಇಂದ್ರಿಯವ, ಏಳನೆಯ ಧಾತುವ, ಒಡಲಷ್ಟ ತನುವನು ಕೆಡೆ ಮೆಟ್ಟಿ ಶಿಖರದ ತುದಿಯ ಮೇಲೆರಿಸು, ಮತ್ತೆರಡಿಲ್ಲದೆ ನಡೆ, ಅಲ್ಲಿಂದ ಹಿಡಿದು ಲಂಘನೆ ಮಾಡೆ ಹಡೆವೆ ಮೋಕ್ಷವನೆಂದನಂಬಿಗರ ಚೌಡಯ್ಯ.