Index   ವಚನ - 9    Search  
 
ಶ್ರೀಗುರುಸ್ವಾಮಿ ಕರುಣಿಸಿ ಕೊಟ್ಟ ಇಷ್ಟಲಿಂಗವ ಕರ ಮನ ಭಾವದೊಳಗಿಟ್ಟು ಪೂಜೆಮಾಡಲರಿಯದೆ ಭ್ರಷ್ಟ ವಿಪ್ರನ ಮಾತು ಕೇಳಿ ನಷ್ಟಕ್ಕೊಳಗಾಗುವ, ಕಂಚು ತಾಮ್ರ ಮೊದಲಾದ ಅನಂತದೇವರ ಭಜನೆಯ ಮಾಡುವ ಮಡ್ಡ ಜಡಮಾದಿಗರ ಎನಗೊಮ್ಮೆ ತೋರದಿರಯ್ಯ ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.