Index   ವಚನ - 12    Search  
 
ಮಗನ ಮದುವೆಯ ತೊಡಗಿದಾಗ ಎಡಬಲದ ಗುರುಹಿರಿಯರನು ಉದಾಸೀನವ ಮಾಡಿ, ಪೊಡವಿಗೆ ಕಿರಿದಾಗಿ ಇರುವ ಎಡಗ ವಿಪ್ರನ ಜೋಯಿಸನ ಕರೆಸಿ ಕರವಂ ಮುಗಿದು, ಎಲೆ ಅಡಿಕೆ ಕಾಂಚಾಣವ ಕೊಟ್ಟು ಎಡರು ಬಾರದ ಕಂಟಕವ ಕಳದು ಸಡಗರ ಸಾಮ್ರಾಜ್ಯ ಉಚ್ಚಹ ಮದುವೆ ಮಾಂಗಲ್ಯದ ಶುಭಮುಹೂರ್ತ ಶುಭದಿನ, ಶುಭತಾರೆ, ಶುಭಲಗ್ನ, ಶುಭವೇಳೆ ಬೆಸಗೊಂಡು ಮದುವೆಯ ಮಾಡುವ ಶಿವಭಕ್ತರಿಗೆ ಭವಭವಾಂತರದಲ್ಲಿ ಮೀನ ಮೊಸಳೆ ಏಡಿ ಕಪಿಯ ಬಸುರಲ್ಲಿ ಹುಟ್ಟಿ ಸತ್ತು ಕಣ್ಣ ಕಾಣದೆ ಕತ್ತೆ ಸೂಕರ ಶ್ವಾನನ ಜನ್ಮವೆ ಪ್ರಾಪ್ತಿ ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.