Index   ವಚನ - 14    Search  
 
ಶಿವನು ಜಗದ್ಭರಿತನೆಂದೆಂಬರ ಬಾಯಲ್ಲಿ ಇಕ್ಕಿರೊ ಹನ್ನೆರಡು ವರ್ಷದ ಹಳೆಯ ಪಾದರಕ್ಷೆಯನು. ಅದೇನು ಕಾರಣವೆಂದಡೆ: ಶಿವನು ಜಗದ್ಭರಿತನೆ? ಅಲ್ಲ. ಶಿವನು ಜಗದ್ಭರಿತನಾದೊಡೆ ಜೀವಕ್ಕೆ ಜೀವ ಭಕ್ಷಿಸಲೇತಕೊ? ಶಿವನು ಜಗದ್ಭರಿತನಾದೊಡೆ ಪ್ರಾಣಕ್ಕೆ ಪ್ರಾಣ ವಿರೋಧಿಸಲೇತಕೊ? ಶಿವನು ಜಗದ್ಭರಿತನೆಂದರಿಯದೊಡೆ ತಾನೆ ಗುರು ತಾನೆ ಲಿಂಗ ತಾನೆ ಜಂಗಮ ತಾನೆ ಪಾದೋದಕ ತಾನೆ ಪ್ರಸಾದ ಕಾಣಾ ನಿಸ್ಸಂಗ ನಿರಾಳಪ್ರಭುವೆ.