Index   ವಚನ - 1    Search  
 
ಪರಧನ ಪರಾನ್ನ ಪರಸ್ತ್ರೀಯರಾಸೆ ಬಿಡದು, ಶರಣನೆಂತೆಂಬೆ ಮರುಳೆ? "ಜಿಹ್ವೆದಗ್ಧ ಪರಾನ್ನಂಚ ಹಸ್ತದಗ್ಧ ಪ್ರತಿಗ್ರಹಂ ಚಕ್ಷುದಗ್ಧ ಪರಸ್ತ್ರೀನಾಂ ತಸ್ಯ ಜನ್ಮ ನಿರರ್ಥಕಂ" ಎಂದು ಶ್ರುತಿ ಸಾರಲು ಮತಿಗೆಡುವನಕಟಾ, ನಿವೃತ್ತಿ ಸಂಗಯ್ಯನೆಂತೊಲಿವನವ್ವಾ!