ಬ್ರಾಹ್ಮಣ ಶಿವಭಕ್ತನಾದ ಬಳಿಕ ಬ್ರಾಹ್ಮಣರ ಬೆರಸಲಾಗದು.
ಕ್ಷತ್ರಿಯ ಶಿವಭಕ್ತನಾದ ಬಳಿಕ ಕ್ಷತ್ರಿಯರ ಬೆರಸಲಾಗದು.
ವೈಶ್ಯ ಶಿವಭಕ್ತನಾದ ಬಳಿಕ ವೈಶ್ಯರ ಬೆರಸಲಾಗದು.
ಶೂದ್ರ ಶಿವಭಕ್ತನಾದ ಬಳಿಕ ಶೂದ್ರರ ಬೆರಸಲಾಗದು.
ಇವರ ಜೀವದತೀತರ ಜಾತಿಯ ಉದ್ಭವಮಂ
ಇವದಿರ ಕಾಯಕ ಕುಲದರುಶನ ಪಕ್ಷ
ಸಪ್ತಧಾತು ಸರಿಯೆಂದೆಂಬರೆ
"ಕೃತಂ ಜೀವಂ ಕೃತಂ ಫಲಂ"
ಅಗ್ರಜ ಮೊದಲು ಅಂತ್ಯಜ ಕಡೆ
"ಬ್ರಾಹ್ಮಣ ಕ್ಷತ್ರಿಯ ವೈಶ್ಯ
ಶೂದ್ರೋವಾ ಗುರುಹಸ್ತಯೋ||
ಪ್ರತಿ ಭೂಜನ ಕರ್ತವ್ಯಂ
ಕರ್ತವ್ಯಂ ಪುನರ್ವತಾಯೋ"
ನಿವೃತ್ತಿ ಸಂಗಯ್ಯದೇವ ಬಲ್ಲ.
ಜಾತಿ ವಿಚಾರದ ಭೇದವ ಬಿಟ್ಟರೆ ಬಿಡುವುದು
ಬಿಡದಿರ್ದಡೆ ತಮ್ಮ ಮುನ್ನಿನಂತಿಹುದು.