ಸಚರಾಚರವೆಲ್ಲಕ್ಕೆ ಆಸೆಯೆ ಪ್ರಾಣ.
ಸಚರಾಚರದ ಚತುರಾಸಿ ಬಲದೂಳಗೆ
ಆಸೆಯಿಲ್ಲದೆ ಚರಿಸುವ ಲಿಂಗಾಂಗಿಯ ತೋರಾ.
"ಆಸೆಯಾ ಬದ್ಧತೇ ಲೋಕೇ
ಕರ್ಮಣಾ ಬಹು ಬಂತಯಾ
ಆಯು ಕ್ಷೀಣನ ಜಾನಾತಿ
ಮೇಣುಸೂತ್ರ ವಿಧೀಯತೇ"
ಎಂದುದಾಗಿ, ಆಸೆಯನೆ ಧಿಕ್ಕರಿಸಿ
ನಿರಾಸೆಯಲಿ ನಡೆವವರ ಸರಿಯೆಂಬೆ ಕಾಣಾ,
ನಿವೃತ್ತಿ ಸಂಗಯ್ಯ.
Art
Manuscript
Music
Courtesy:
Transliteration
Sacarācaravellakke āseye prāṇa.
Sacarācarada caturāsi baladūḷage
āseyillade carisuva liṅgāṅgiya tōrā.
Āseyā bad'dhatē lōkē
karmaṇā bahu bantayā
āyu kṣīṇana jānāti
mēṇusūtra vidhīyatē
endudāgi, āseyane dhikkarisi
nirāseyali naḍevavara sariyembe kāṇā,
nivr̥tti saṅgayya.