Index   ವಚನ - 17    Search  
 
ಅತೀತವಡಗಿ, ನಿರಾಲಂಬದ ಮನದ ಮೂರ್ತಿಯಂ ತಿಳಿದು, ಮನೋವ್ಯಾಧಿಯಂ ಪರಿಹರಿಸಿಕೊಂಡು, ಭಾವದ ಸೂತಕವಳಿದು ಬ್ರಹ್ಮದ ನೆಮ್ಮುಗೆಯಂ ತಿಳಿದು, ಮನ ವಿಶ್ರಾಂತಿಯನೆಯ್ದಿ, ವಿಚಾರದನುಭವವನರಿದು, ವಿವೇಕದಿಂದಾನು ವಿಶೇಷ ಸುಖವ ಕಂಡೆನಯ್ಯಾ ಸಂಗಯ್ಯಾ, ಬಸವನಿಂದಲಿ.