Index   ವಚನ - 23    Search  
 
ಅರಸರಸಲು ನಾನು ಅರಸುವ ವಸ್ತು ಎನ್ನ ಕಣ್ಣಿಂಗೆ ಕಾಣಲಾಯಿತ್ತು. ಬಯಕೆಯ ಬಯಸಲು ನಾನು ಬಯಸುವ ವಸ್ತು ಕೈಗೂಡಿತ್ತು. ನಾನೆಂತಹ ಪುಣ್ಯವುಳ್ಳವಳೋ! ನಾನೆಂತಹ ಮುಕ್ತಿಯುಳ್ಳವಳೋ! ನಾನು ಭಯದ ಸಂಗವ ಹರಿದು ನಿಸ್ಸಂಗಿಯಾದೆನು ಸಂಗಯ್ಯನಲ್ಲಿ ದ್ವಂದ್ವಕರ್ಮರಹಿತಳು.