ಅರಿಯೆನರಿಯೆನಿಂತಹ ಮೂರ್ತಿಯ,
ಅರಿಯದವನಲ್ಲ.
ನಾನು ಬೆರಸಿರಲು ಸುಖದಿಂದ ಪ್ರಣವಾಕ್ಷರವಾಯಿತ್ತಯ್ಯ.
ಆ ಪ್ರಣವಾಕ್ಷರವೆ ಪ್ರಸಾದವಾಯಿತ್ತು.
ಆ ಪ್ರಸಾದದ ನೆಲೆಯಿಂದ ಮನ ವಿಶೇಷವಾಯಿತ್ತು.
ವಿಶೇಷ ವಿಚಾರದಿಂದ ವಿನಯಾರ್ತ ಪ್ರಸಾದಿಯಾನಾದೆನಯ್ಯ.
ಪ್ರಸಾದಸುಖದಿಂದ ಮುಖ ವಿಶೇಷವಾಯಿತ್ತು.
ಸಂಗಯ್ಯ, ನಿಮ್ಮ ಬಸವನಿಂದ ನಾನು,
ಪರಿಣಾಮಿಯಾದೆನು.