Index   ವಚನ - 28    Search  
 
ಅರಿವನರಸಿ, ಅರಿವ ಕುರುಹಿನಲ್ಲಿ ಕಂಡು, ಆ ಕುರುಹ ಮರದು, ಮನ ಮಹಾಲಿಂಗದಲ್ಲಿ ಒಚ್ಚತಗೊಟ್ಟು, ಉಭಯಪ್ರಸಾದವನುಂಡು, ಉಣಲಿಲ್ಲದೆ ಉಭಯಗೆಟ್ಟೆನಯ್ಯ ಸಂಗಯ್ಯ.