Index   ವಚನ - 54    Search  
 
ಇಬ್ಬರು ನಾವು ಒಂದೆಡೆಯನುಂಡೆವು. ಉಂಬ ಊಟದಲ್ಲಿ ತೃಪ್ತಿಯ ತಳದು ತನು ಸೋಜಿಗವಾಯಿತ್ತಯ್ಯ. ಮನ ಮಗ್ನವನೈದಿ ಮಹಾಲಿಂಗದತ್ತ ಶುದ್ಭಿ ನಿಃಶುದ್ಧಿಯಾಯಿತ್ತಯ್ಯ. ಅಡಗಿದೆನಡಗಿದೆನತ್ತತ್ತಲೆ ನಾನು. ಉಡುಗಿದೆನೀ ಕಾಯವ: ಉಭಯದ ಸಂಗವ ಹರಿದು ಉಲುಹಡಗಿದ ವೃಕ್ಷವಾದೆನಯ್ಯ ಸಂಗಯ್ಯ.