Index   ವಚನ - 66    Search  
 
ಎಡೆಯಿಲ್ಲದ ಭಕ್ತಿಯ ಮಾಡಹೋದರೆ ಆ ಭಕ್ತಿ ನಿಷ್ಫಲವಾಯಿತ್ತಯ್ಯ.ಭಕ್ತಿ ನಿಷ್ಫಲವನೈದಲು ಪ್ರಸಾದ ಸೂತಕವ ಕಾಣದೆ ಹೋದೆನಯ್ಯ. ಎಡೆಯಿಲ್ಲದ ಕಡೆಯಿಲ್ಲದ ಮೂರ್ತಿಯನರಸಲು ಏಕಪ್ರಸನ್ನ ವದನವಾಯಿತ್ತಯ್ಯ. ಹಿಪ್ಪೆಯನಳಿದು ಸಪ್ಪೆಯನುಂಡು ನಾನು ಪ್ರಸಾದಿಯಾದೆನಯ್ಯ ಸಂಗಯ್ಯ.