Index   ವಚನ - 70    Search  
 
ಎದೆಬಿರಿವನ್ನಕ್ಕರ, ಮನದಣಿವನ್ನಕ್ಕರ, ನಾಲಗೆ ನಲಿನಲಿದೋಲಾಡುವನ್ನಕ್ಕರ, ನಿಮ್ಮ ನಾಮಾಮೃತವ ತಂದೆರೆಸು ಕಂಡಯ್ಯಾ. ಶಿವನಾಮಾಮೃತವ ತಂದೆರೆಸು ಕಂಡಯ್ಯಾ. ಶಿವನಾಮಾಮೃತವ ತಂದೆರೆಸು ಕಂಡೆಲೆ ಹರನೆ. ಬಿರಿಮುಗುಳಂದದ ಶರೀರ ನಿಮ್ಮ ಚರಣದ ಮೇಲೆ ಬಿದ್ದುರುಳುಗೆ ಸಂಗಯ್ಯ.