Index   ವಚನ - 84    Search  
 
ಎನ್ನ ಕೈಯಳ ಮಾತುವೆನ್ನ ಕೈಯಲಡಗಿತ್ತು. ಎನ್ನ ವಿಧಾನದ ಜ್ಯೋತಿ ವಿವೇಕದಲ್ಲಿಯಡಗಿತ್ತು. ವಿನೇಯದ ಸುಖವ ಕಂಡು ನಾನು ನಿರ್ಮಲಾಂಗಿಯಾದೆನು. ಭ್ರಮೆಯಳಿದು ಭಕ್ತಿಯಳಿದು ಭಾವ ನಿರ್ಭಾವವಾಗಿ, ತನುಸೂತಕ ಮನಸೂತಕವ ಕಳೆದು ನಾನು ಬ್ರಹ್ಮದ ನೆಮ್ಮುಗೆಯಲ್ಲಿ ಸುಮ್ಮನಿದ್ದೆನು ಸುಖ ದುಃಖಗಳಡಗಿ ನಿರಾಲಂಬಿಯಾದೆನಯ್ಯ ಸಂಗಯ್ಯ ಬಸವನೆನ್ನಲ್ಲಿಯಡಗಲು.