Index   ವಚನ - 110    Search  
 
ಎಸೆವಕ್ಷರಕ್ಕೆ ಹೆಸರಿಲ್ಲ, ಆ ಹೆಸರಿಂಗೆ ರೂಹಿಲ್ಲ; ರೂಪಿಂಗೆ ನಿರೂಪಿಲ್ಲ. ನಿರೂಪಳಿದು ನಿರಾಕುಳವಾಗಿ ನೀರ ಸಂಗಕ್ಕೆ ಹೋದರೆ, ಆ ನೀರು ಬಯಲಾಳವ ತೋರಿತ್ತಯ್ಯ ಸಂಗಯ್ಯ.