Index   ವಚನ - 121    Search  
 
ಏಣನ ಗರಳ, ಎಸಳಗಂಗಳ ಸಾರಂಗ, ಪ್ರಭೆಯನೊಳಕೊಂಡ ಮೊಲ, ಈ ಮೂರು ಮೃಗವನೆಚ್ಚು ಬಾಣಸವ ಮಾಡಿ, ಸಂಗಯ್ಯಂಗಿತ್ತು ಸುಖಿಯಾದನಯ್ಯಾ. ಬಸವನಗಣಿತಮೂರ್ತಿಯಯ್ಯಾ, ಇಹಪರ ನಾಯಕನು.