Index   ವಚನ - 126    Search  
 
ಏತರಲ್ಲಿಯೂ ಹೆಸರಿಲ್ಲದ ಕುರುಹು, ಈ ವಸ್ತು ಬಸವಯ್ಯನು. ಏತರಲ್ಲಿಯೂ ನೆಲೆಯಿಲ್ಲದ ಮೂರ್ತಿ ಈ ವಸ್ತು ಬಸವಯ್ಯನು. ಏತರಲ್ಲಿಯೂ ತೆರಹಿಲ್ಲದೆ ಪರಿಪೂರ್ಣವಾಗಿರಲು ಬಸವಯ್ಯನು, ಪ್ರಭೆ ಬೆಳಗಿತ್ತು ಬಸವಂಗೆ, ಪ್ರಕಾಶವಡಗಿತ್ತು ಬಸವಂಗೆ, ಪರಿಣಾಮ ಉಡುಗಿತ್ತು ಬಸವಂಗೆ, ಮನವಳಿಯಿತ್ತು ಬಸವಂಗೆ, ಸಂಗಯ್ಯನಲ್ಲಿ ಬಸವ ಸ್ವಯಲಿಂಗಿಯಾದ ಬಳಿಕ.