Index   ವಚನ - 127    Search  
 
ಏನೂ ಏನೂ ಎನಲಿಲ್ಲ ಎನ್ನ ಭಕ್ತಿಯಳಿದ ಭಾವಕ್ಕೆ ಇನ್ನೇನೂ ಏನೂ ಎನಲಿಲ್ಲ. ಎನ್ನ ಪ್ರಾಣದ ಹಂಗಹರಿದಬಳಿಕ ಇನ್ನೇನೂ ಏನೂ ಎನಲಿಲ್ಲ. ಎನ್ನೈಕ್ಯದ ಸಮರಸ ಕೈಗೂಡಿದಬಳಿಕ ಇನ್ನೇನೂ ಏನೂ ಎನಲಿಲ್ಲ. ಎನ್ನಭಿಮಾನದ ಕರ್ತು ನಿರಾಳದಲ್ಲಿ ನಿಂದ ಬಳಿಕ, ಸಯದಾನ ಸುಯಿದಾನವಾಯಿತ್ತಯ್ಯಾ, ಸಂಗಯ್ಯಾ.