Index   ವಚನ - 138    Search  
 
ಕಲಿಯುಗದಲ್ಲಿ ಹುಟ್ಟಿ ಆ ಕಲಿಯುಗದಲ್ಲಿ ಬೆಳೆದೆನಯ್ಯ. ಕೃತಯುಗದಲ್ಲಿ ಹುಟ್ಟಿ ಆ ಕೃತಯುಗದಲ್ಲಿ ಬೆಳೆದೆನಯ್ಯ. ದ್ವಾಪರದಲ್ಲಿ ಹುಟ್ಟಿ ಆ ದ್ವಾಪರದಲ್ಲಿಯೆ ಬೆಳೆದೆನಯ್ಯ. ತ್ರೇತಾಯುಗದಲ್ಲಿ ಹುಟ್ಟಿ ಆ ತ್ರೇತಾಯುಗದಲ್ಲಿಯೆ ಬೆಳೆದೆನಯ್ಯ. ಎನಗೆ ಪ್ರಾಣವಿಲ್ಲ ಎನಗೆ ಕಾಯವಿಲ್ಲ. ನಾನೇತರಲ್ಲಿಯೂ ಹೊಂದಿದವಳಲ್ಲ. ಅಜಾತನ ಕಲ್ಪಿತ ಸಂಬಂಧವಾಗಲು ಆನು ನಿಮ್ಮೈಕ್ಯದಲ್ಲಿ ನಿಂದೆನಯ್ಯ ಸಂಗಯ್ಯ.